ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಯಕ್ಷಗಾನವನ್ನು ವೃತವಾಗಿ ಸ್ವೀಕರಿಸಿ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಸೋಮವಾರ, ಸೆಪ್ಟೆ೦ಬರ್ 23 , 2013
ಸೆಪ್ಟೆ೦ಬರ್ 23 , 2013

ಯಕ್ಷಗಾನವನ್ನು ವೃತವಾಗಿ ಸ್ವೀಕರಿಸಿ

ಮಂಗಳೂರು : ಯಕ್ಷಗಾನವನ್ನು ಒಂದು ವೃತ್ತಿಯಾಗಿ ಸ್ವೀಕರಿಸುವ ಬದಲು ವೃತವಾಗಿ ಸ್ವೀಕರಿಸಿದಾಗ ಮಾತ್ರ ಯಕ್ಷಗಾನ ತನ್ನ ತನವನ್ನು ಉಳಿಸಿಕೊಳ್ಳಲು ಸಾಧ್ಯ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲ್‌ ಹೇಳಿದರು.

ಅವರು ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ, ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಧನ್ಯತಾ ಪ್ರತಿಷ್ಠಾನ ಮಂಗಳೂರು ಮತ್ತು ಸರಯೂ ಬಾಲಯಕ್ಷವೃಂದ ಕೋಡಿಕಲ್‌ ವತಿಯಿಂದ ರವಿವಾರ ನಗರದ ಪುರಭವನದಲ್ಲಿ ನಡೆದ ಶ್ರೀಮಯ ಯಕ್ಷತ್ರಿವೇಣಿ ಸಮ್ಮಾನ, ಯಕ್ಷಗಾನ ಪ್ರದರ್ಶನ ಕಾರ್ಯಕ್ರಮದ ಕೊನೆಯ ದಿನದ ಸಭಾಕಾರ್ಯಕ್ರಮದಲ್ಲಿ ಮಾತನಾಡಿದರು.

ಅಗರಿ ರಘುರಾಮ ಭಾಗವತ ಅವರನ್ನು ಸಮ್ಮಾನಿಸಲಾಯಿತು
ಯಕ್ಷಗಾನವನ್ನು ವೃತ್ತಿಯಾಗಿ ಸ್ವೀಕರಿಸಿದಾಗ ವೈಯಕ್ತಿಕ ದ್ವೇಷಗಳು ಹೆಚ್ಚುತ್ತವೆ ಮತ್ತು ಯಕ್ಷಗಾನ ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತದೆ. ಆದ್ದರಿಂದ ಯಕ್ಷಗಾನವನ್ನು ಉಳಿಸಿ ಬೆಳೆಸುವ ಕಾರ್ಯನಡೆಯಬೇಕಾಗಿದೆ ಎಂದರು. ಯಕ್ಷಗಾನವನ್ನು ಜಗದ್ವಿಖ್ಯಾತಗೊಳಿಸುವಲ್ಲಿ ಕೆರೆಮನೆ ಮನೆತನದ ಪಾತ್ರ ಮುಖ್ಯವಾದುದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಧ್ಯಾಪಕಿ ಭುವನೇಶ್ವರಿ ಹೆಗಡೆ ಮಾತನಾಡಿ, ಯಕ್ಷಗಾನವನ್ನು ತೆಂಕುತಿಟ್ಟು ಬಡಗುತಿಟ್ಟು ಎಂದು ವಿಭಾಗಿಸುವ ಬದಲು ಯಕ್ಷತಿಟ್ಟು ಮಾಡೋಣ ಎಂದರು.

ಸುರತ್ಕಲ್‌ ಮೇಳದಲ್ಲಿ 37 ವರ್ಷಗಳ ಕಾಲ ಭಾಗವತರಾಗಿ ಸೇವೆ ಸಲ್ಲಿಸಿದ ಅಗರಿ ರಘುರಾಮ ಭಾಗವತ ಅವರನ್ನು ಸಮ್ಮಾನಿಸಲಾಯಿತು.

ಉದ್ಯಮಿ ಸಿ.ಟಿ. ಪೈ, ಶ್ರೀ ಮಂಗಳಾದೇವಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರಮಾನಾಥ ಹೆಗ್ಡೆ, ಸಾಂಸ್ಕೃತಿಕ ಸಂಘಟಕ ಕೆ.ವಿ. ರಮಣ, ಜೈನ್‌ ಟ್ರಾವೆಲ್ಸ್‌ನ ಮಾಲಕ ರತ್ನಾಕರ ಜೈನ್‌, ಕೆರೆಮನೆ ನಿರಂಜನ್‌ ಹೆಗಡೆ, ಸುಧಾಕರ ರಾವ್‌ ಪೇಜಾವರ, ರವಿ ಅಲೆವೂರಾಯ ಮೊದಲಾದವರು ಉಪಸ್ಥಿತರಿದ್ದರು.

ಕೆರೆಮನೆ ನರಸಿಂಹ ಹೆಗಡೆ ಸ್ವಾಗತಿಸಿ ವಂದಿಸಿದರು. ಪುಷ್ಕಳ್‌ ಕುಮಾರ್‌ ಕಾರ್ಯಕ್ರಮ ನಿರೂಪಿಸಿದರು.

ಅನಂತರ ಇಡಗುಂಜಿ ಮೇಳದವರಿಂದ ಮೂರನೇ ದಿನದ ಯಕ್ಷಗಾನ 'ಕಂಸವಧೆ'ಯ ಪ್ರದರ್ಶನ ನಡೆಯಿತು.

ಅಗರಿ ಇಂದಿನ ರಾಜಕಾರಣಿಗಳಿಗೆ ಮಾದರಿ.

ಅಗರಿ ರಘುರಾಮ ಭಾಗವತರು ಕೇವಲ ಯಕ್ಷಗಾನ ಕಲಾವಿದರಿಗೆ ಮಾತ್ರ ಮಾದರಿಯಲ್ಲ, ಇಂದಿನ ರಾಜಕಾರಣಿಗಳಿಗೂ ಮಾದರಿಯಾಗಿದ್ದಾರೆ. ಇಂದಿನ ರಾಜಕಾರಣಿಗಳು ಪಕ್ಷಾಂತರ ಮಾಡಿಕೊಂಡು ಹಲವಾರು ಪಕ್ಷಗಳಿಗೆ ಹೋಗುತ್ತಾರೆ ಆದರೆ 37 ವರ್ಷಗಳ ಕಾಲ ಸುರತ್ಕಲ್‌ ಮೇಳ ಒಂದರಲ್ಲೇ ಭಾಗವತರಾಗಿ ಕೆಲಸಮಾಡಿದ್ದಾರೆ.

ಕೃಪೆ : ಉದಯವಾಣಿ

Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ